Google search engine
Homeಜಿಲ್ಲೆ ಸುದ್ದಿಚುಂಚಿನಕುಪ್ಪೆದಲ್ಲಿ ಸ್ವಚ್ಛತಾ"ಕಾ" ಮತ್ತುಸಫಾಯಿಕರ್ಮಚಾರಿಗಳ ನಿಯೋಜನೆಗಾಗಿ ಆದಿ ಜಾಂಬವಸಂಘಕ್ಕೆಮಂಜೂರಾದ15ಎಕರೆ ಜಮೀನು

ಚುಂಚಿನಕುಪ್ಪೆದಲ್ಲಿ ಸ್ವಚ್ಛತಾ”ಕಾ” ಮತ್ತುಸಫಾಯಿಕರ್ಮಚಾರಿಗಳ ನಿಯೋಜನೆಗಾಗಿ ಆದಿ ಜಾಂಬವಸಂಘಕ್ಕೆಮಂಜೂರಾದ15ಎಕರೆ ಜಮೀನು

ಬೆಂಗಳೂರು ನವಂಬರ್ 28 (ಪೌರವಾಣಿ):ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ದಕ್ಷಿಣ ತಾಲೂಕು ಚುಂಚಿನ ಕುಪ್ಪೆ ಗ್ರಾಮದ ಸರ್ವೆ ನಂ.44-45 ಆದಿ ಜಾಂಬವ ಸಂಘದ ವತಿಯಿಂದ ನಿರುದ್ಯೋಗಿ ಮತ್ತು ಸ್ವಚ್ಛತಾ ಕಾರ್ಮಿಕರ, ಸಫಾಯಿ ಕರ್ಮಚಾರಿಗಳಿಗೆ 16.11.2014 ರಂದು ಹದಿನೈದು ಎಕರೆ ಜಾಗವನ್ನು ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘಕ್ಕೆ ಮಂಜು ರಾಗಿದ ಎಂದು ಸಂಘದ ಕಾರ್ಯಾಧ್ಯಕ್ಷರು ತಿಳಿಸಿದರು. ಜಾಗವನ್ನು ಗಣಿ ಮಾಲೀಕರು ಅಕ್ರಮವಾಗಿ ವಶಪಡಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ಕಾರ್ಯಾಧ್ಯಕ್ಷ ಜಂಬೂದ್ವೀಪ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಸಿ.ವಿ.ರಮೇಶ್ ಕುಮಾರ್ ಅವರು ಸಂಘದ ಉಪಾಧ್ಯಕ್ಷರಾದ ಹನುಮಂತರಾಜು ಮಾಚೋಹೆಳ್ಳಿ ರವರು ಮತ್ತು ಪದಾಧಿಕಾರಿಗಳು ಎಲ್ಲರೂ ಬೆಂಗಳೂರು ನಗರ ಜಿಲ್ಲಾಧಿಕಾರಿ ರವರನ್ನು ಭೇಟಿ ಮಾಡಿ ಗಣಿ ಗುತ್ತಿಗೆ ಮಾಲೀಕರು ಕಾನೂನು ವಿರುದ್ಧವಾಗಿ ಗುತ್ತಿಗೆ ಪಡೆದಿರುವ ಗಣಿಗಳ ಮಾಲೀಕರು ಅಕ್ರಮವಾಗಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಜಮೀನು ಅಗೆದು ಜಲ್ಲಿ ಸಾಗಿಸುವುದನ್ನು ತಡೆಯಲು ಮುಂದಾಗಿ ಬೇಕು ಮತ್ತು ಪರಿಶೀಲಿಸುವಂತೆ ಕೋರಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಅದು ಪರಿಣಾಮ 28.11.2025 ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಚುಂಚಿನ ಕುಪ್ಪೆ ಗ್ರಾಮದ ಸರ್ವೆ ಸಂಖ್ಯೆ 44 ಸ್ಥಳಕ್ಕೆ ಭೇಟಿ ನೀಡಿದ್ದರು, ಜಾಗವನ್ನು ಪರಿಶೀಲಿಸಿದರು. ಗಣಿ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಗುತ್ತಿಗೆಗಣಿ ಮಾಲೀಕರ ಮೇಲೆ ಕ್ರಮವಹಿಸಬೇಕು ಎಂದು ಮತ್ತು ಈ ಭೂಮಿಯನ್ನು ಆದಿ ಜಾಂಬವ ಸಂಘಕ್ಕೆ ನೀಡಲು ಕ್ರಮಕೈಗೊಳ್ಳುವಂತೆ ಸಂಘದ ಕಾರ್ಯಾಧ್ಯಕ್ಷರಾದ ಜಂಬುದ್ವೀಪ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಸಿ.ವಿ.ರಮೇಶ್ ಕುಮಾರ್, ಸಂಘದ ಉಪಾಧ್ಯಕ್ಷರಾದ ಅವರು ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments