ಬೆಂಗಳೂರು, ಮಾ.20. ಪೌರ ವಾಣಿ- ಒಳ ಮೀಸಲಾತಿ ಇಲ್ಲದೆ 56,432 ಸರ್ಕಾರಿ ಉದ್ಯೋಗ ನೇಮಕ ಮಾಡಲು ಆದೇಶ ಹೊರಡಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಮಾದಿಗ ಸಂಘಟನೆಗಳ ಒಕ್ಕೂಟ ಇದೇ 25 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯದ ಎಲ್ಲಾ 31 ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ದಸಂಸ ಅಧ್ಯಕ್ಷ ಎನ್.ಮೂರ್ತಿ, ಕೇಶವಮೂತಿ ೯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹುಜನ ಚಳುವಳಿ ಕೃಷ್ಣಪ್ಪ, ಮಾದಿಗ ದಂಡೋರ ದೇವ ‘ರಾಜ್, ಜೈ ಬೀಮ್ ಸಂಘಟನೆಯ ಮುನಿರಾಜು, ಆದಿ ಜಾಂಬವ ಸಂಘಟನೆಯ ಜಂಬೂ ಸಿದ್ದ ರಾಜು, ಬೆಂಗಳೂರಿನಲ್ಲಿ ಮೌರ್ಯಸರ್ಕಲ್‌ನ ಗಾಂಧಿ ಪ್ರತಿಮೆಯಿಂದ ಮುಖ್ಯಮಂತ್ರಿ ನಿವಾಸಕ್ಕೆ ಪ್ರತಿಭಟನಾ ರ್ಯಾಲಿ ಆಯೋಜಿಸಲಾಗಿದೆ ಎಂದರು. ಪರಿಶಿಷ್ಟ ಜಾತಿಗಳ ಮೀಸಲಾತಿ 101 ಜಾತಿಗಳ ನಡುವೆ ಸಮನಾಗಿ ಹಂಚಿಕೆಯಾಗಿಲ್ಲ ಹಾಗಾಗಿ ಮೀಸಲಾತಿ ವರ್ಗೀಕರಿಸಬೇಕು ಎಂದು ಕಳೆದ 35 ವರ್ಷಗಳಿಂದ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಸಿದ್ದೇವೆ. ರಾಜ್ಯಸರ್ಕಾರಕ್ಕೆ ಅಧಿಕಾರವಿದೆ, ದತ್ತಾಂಶ ಸಂಗ್ರಹಿಸಿ ವರ್ಗೀಕರಿಸಲಿ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೋರ್ಪು ನೀಡಿದೆ. ಹಳೇ ರೋಸ್ಟ್ ವಿಧಾನದಂತೆ 56432 ಉದ್ಯೋಗ ನೇಮಕ ಮಾಡಲು ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಕಾನೂನು ಬಾಹಿರ, ಅವೈಜ್ಞಾನಿಕ ಎಂದು ಹೇಳಿದರು. ವಿಶ್ವ ಜಾಂಬವ ಮಹಾಸಭಾದ ಡಾ.ಭೀಮ್ ರಾಜ್, ಮೂಲ ಮಾದಿಗ ಮೂಮೆಂಟ್ ಜೆ.ಸಿ.ಪ್ರಕಾಶ್, ಆದಿ ಜಾಂಬವ ಸಂಘದ ಪ್ರಧಾನ ರಮೇಶ್ ಕುಮಾರ್, ದಲಿತ ಸೇನೆಯ ನಿಂಗರಾಜು,ಡಿ.ವಿ.ನಾರಾಯಣ ಸ್ವಾಮಿ, ಮಾದಿಗ ದಂಡೋರ ಮತ್ತಿತರರಿದ್ದರು.
56432ಸರ್ಕಾರಿ ಉದ್ಯೋಗನಿಯಮಕ ಮಾಡಲುಆದೇಶ ಹೊರಡಿಸಿರುವ ಸರ್ಕಾರಿ ಕ್ರಮವನ್ನುವಿರೋಧಿಸಿರಾಜ್ಯಾದ್ಯಂತ 25ಕ್ಕೆ ಪ್ರತಿಭಟನೆ
RELATED ARTICLES







