Google search engine
Homeಜಿಲ್ಲೆ ಸುದ್ದಿವಾಣಿ ಮಾನ್ವಿ ತಾ ಮಾ 23 : ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಅಗ್ರಗಣ್ಯರಾದ ಜೇಡರ ದಾಸಿಮಯ್ಯ

ವಾಣಿ ಮಾನ್ವಿ ತಾ ಮಾ 23 : ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಅಗ್ರಗಣ್ಯರಾದ ಜೇಡರ ದಾಸಿಮಯ್ಯ

ವಚನಗಳಿಂದ ಸಮಾಜದ ಸಮಸ್ಯೆಗಳಿಗೆ ಪರಿಹಾರ: ಕೆ.ಈ.ನರಸಿಂಹ
ಮಾನ್ವಿ : ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಅಗ್ರಗಣ್ಯರಾದ ಜೇಡರ ದಾಸಿಮಯ್ಯ ದೇವರಿಗೇ ಸವಾಲು ಹಾಕಿದ ಗಟ್ಟಿಗ ವ್ಯಕ್ತಿತ್ವ ಹೊಂದಿದವರು ಎಂದು ತಾಲೂಕು ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕೆ.ಈ.ನರಸಿಂಹ ಹೇಳಿದರು. ಅವರು ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಆದ್ಯ ವಚನಕಾರ ಜೇಡರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯ ವಚನ ಸಾಹಿತ್ಯವು ಜಾಗತಿಕ ಮಹತ್ವ ಪಡೆದಿದ್ದು, ದಾಸಿಮಯ್ಯರ ವಚನಗಳು ಸಮಾಜದ ಸರ್ವರ ಬದುಕಿನ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗಿವೆ ಎಂದು ಹೇಳಿದರು. ಮಾತಿನ ಉದ್ದಕ್ಕೂ ದಾಸಿಮಯ್ಯರ ವಚನಗಳನ್ನು ಉದಾಹರಣೆ ನೀಡಿ ಅವರ ಸಂದೇಶಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ನೇಕಾರ ಸಮುದಾಯದ ಗುಮ್ಮಾ ಬಸವರಾಜ ವಕೀಲರು, ಮಸ್ಕಿ ಗಂಗಾಧರ, ಜಿ.ಶಿವುಕುಮಾರ, ಜಿ.ಪ್ರೇಮಕುಮಾರ, ಸತೀಶಕುಮಾರ, ಪ್ರದೀಪ್, ಮಾರ್ಕಂಡಯ್ಯ, ಸಿದ್ರಾಮ ಬುದ್ದಿ, ಸುಶಿಲಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ತಹಶೀಲ್ದಾರ ರಾಮಸಮುದ್ರ ಅಧ್ಯಕ್ಷತೆ ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments