Google search engine
Homeಜಿಲ್ಲೆ ಸುದ್ದಿದಲಿತ ವಿರೋಧಿ,ಕನ್ನಡ ವಿರೋಧಿ ರಂಗರಾಜನ್ ರವರಿಗೆ ನೀಡುವ ಪ್ರಶಸ್ತಿಯನ್ನು ರದ್ದುಪಡಿಸಬೇಕೆಂದು ಸಿದ್ದರಾಜು ಪ್ರತಿಭಟನೆ.

ದಲಿತ ವಿರೋಧಿ,ಕನ್ನಡ ವಿರೋಧಿ ರಂಗರಾಜನ್ ರವರಿಗೆ ನೀಡುವ ಪ್ರಶಸ್ತಿಯನ್ನು ರದ್ದುಪಡಿಸಬೇಕೆಂದು ಸಿದ್ದರಾಜು ಪ್ರತಿಭಟನೆ.

ಬೆಂಗಳೂರು, ಪೌರವಾಣಿ: ದಿನಾಂಕ 25/12/2025ರ ಗುರುವಾರ ರಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ರವರಿಗೆ ಏರ್ಪಡಿಸಿದ್ದ ಪುರಸ್ಕಾರ ಸಮಾರಂಭಕ್ಕೆ ಆಗಮಿಸಿರುವ ದಲಿತ ವಿರೋಧಿ, ಕನ್ನಡ ವಿರೋಧಿ ರಂಗರಾಜನ್ ರವರಿಗೆ ಪ್ರಶಸ್ತಿ ರದ್ದುಪಡಿಸಬೇಕೆಂದು ಜಂಬೂದ್ವೀಪ ಸಿದ್ದರಾಜು ರವರ ನೇತೃತ್ವದಲ್ಲಿ ಜಂಬೂದ್ವೀಪ ಜನ ಸೇನೆ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರನ್ನು, ಮಾಜಿ ಉಪ ಮುಖ್ಯಮಂತ್ರಿ ಮತ್ತು ಮಲ್ಲೇಶ್ವರಂ ಶಾಸಕರಾದ ಅಶ್ವತ್ಥನಾರಾಯಣ, ಕೋಲಾರದ ಸಂಸದರಾದ ಮುನಿಸ್ವಾಮಿ, ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ, ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ರವರನ್ನು ಭೇಟಿ ಮಾಡಿ ಚರ್ಚಿಸಿ, ಒಂದು ವಾರದಲ್ಲಿ ವಿಜ್ಞಾನ ಸಂಸ್ಥೆಯ ನಿರ್ದೇಶಕರೊಡನೆ ಸಂಸ್ಥೆಯಲ್ಲಿ ಸಭೆ ನಡೆಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಚೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಆದಿ ಜಾಂಬವ ಸಂಘದ ಉಪಾಧ್ಯಕ್ಷರಾದ ಹನುಮಂತರಾಜು, ಸಂಘದ ಸಂಚಾಲಕರು ಗೋವಿಂದ ಬಾಪೂಜಿ ನಗರ, ಓ.ಜನಾರ್ಧನ್, ಲಿಂಗರಾಜಣ್ಣ , ರಾಮಯ್ಯ ಬಿಬಿಎಂಪಿ (ನಿವೃತ್ತಿ) ಮೇಲ್ವಿಚಾರಕರು, ಪತ್ರಿಕರ್ತರಾದ ಹೊಸಹಳ್ಳಿ ಮಂಜು, ಶಂಕರಣ್ಣ ಕುಮಾರ್, ವಿಶ್ವನಾಥ್ ಮತ್ತು ಮಿತ್ರರು, ಪ್ರತಿಭಟನೆಯಲ್ಲಿ ಸಂಘದ ಅನೇಕ ಮುಖಂಡರು ಭಾಗವಹಿಸಿದ್ದರು. ವರ್ಲ ಗಂಗಾಧರಂ ಸಂಪಾದಕರು. ಪೌರವಾಣಿ ವೆಬ್ ಚಾನೆಲ್ ಮತ್ತು ನಮ್ಮ ದೀಪ ಕನ್ನಡ ಮಾಸ ಪತ್ರಿಕೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments