Google search engine
Homeಜಿಲ್ಲೆ ಸುದ್ದಿಬೆಂಗಳೂರು ಗ್ರಾಮಾಂತರಮಾದಿಗರಿಗೆ ಮತ್ತು ಉಪಜಾತಿಗಳಿಗೆ ಒಳ ಮೀಸಲಾತಿ ನೀಡಿದರೆ ಮಾತ್ರ ಸಮಾನತೆ ಸಾಧ್ಯ; ಜಂಬೂ ದ್ವೀಪ ಸಿದ್ದರಾಜು

ಮಾದಿಗರಿಗೆ ಮತ್ತು ಉಪಜಾತಿಗಳಿಗೆ ಒಳ ಮೀಸಲಾತಿ ನೀಡಿದರೆ ಮಾತ್ರ ಸಮಾನತೆ ಸಾಧ್ಯ; ಜಂಬೂ ದ್ವೀಪ ಸಿದ್ದರಾಜು

ಪೌರವಾಣಿ ಮತ್ತು ನಮ್ಮ ದೀಪ ಸುದ್ದಿ, ಬೆಂಗಳೂರು ಮಾರ್ಚ್ 12; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ತಂದ ವಿಶೇಷ ಘಟಕ ಯೋಜನೆಯ ಅನುದಾನವನ್ನು ಗ್ಯಾರಂಟಿ ಮತ್ತು ಅನ್ಯ ಉದ್ದೇಶಗಳಿಗೆ ವಿನಿಯೋಗಿಸುವುದನ್ನು ತಡೆಯಲು 2013ರ ಕಾಯ್ದೆಯ ಸೆಕ್ಷನ್ 7(ಡಿ) ರದ್ದುಪಡಿಸಿದಂತೆ ಸೆಕ್ಷನ್ 7(ಸಿ) ರದ್ದುಪಡಿಸಿ ಆದೇಶ ಹೊರಡಿಸಬೇಕು.ಒಳ ಮೀಸಲಾತಿ ಯನ್ನು ನಾಗಮೋಹನ್ ದಾಸ್ ವರದಿಯಂತೆ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ಕಾರ್ಯಧ್ಯಕ್ಷರಾದ ಜಂಬುದ್ವೀಪ ಸಿದ್ದರಾಜು ಒತ್ತಾಯಿಸಿದ್ದಾರೆ.

ಕರ್ನಾಟಕ ಮಾದಿಗ ಮತ್ತು ಅಲಮಾರಿ ಸಮುದಾಯ ಮುಖಂಡರ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾದಿಗ ಮಾದಿಗರಿಗೆ ಆಗಿರುವ ಅನ್ಯಾಯ ವಿರುದ್ಧವಾಗಿ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದ ರೂ.25,000 ಕೋಟಿ ಹಣವನ್ನು ಹಿಂತಿರುಗಿಸಬೇಕು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ಖರೀದಿಸುವ ಜಮೀನು ದರ ಅವೈಜ್ಞಾನಿಕವಾಗಿದೆ. ಖಾಸಗಿ ಜಮೀನು ಬೆಲೆ ಅತೀ ಹೆಚ್ಚಳವಾಗಿದ್ದು, ವಸತಿ ಇಲಾಖೆಯು ಹೊರಡಿಸಿರುವ ಆದೇಶವನ್ನು ಪುನಃ ಪರಿಷ್ಕರಿಸಿ ಪ್ರಸ್ತುತ ಭೂಮಿಯ ದರ ಹೆಚ್ಚಿಸಿ ಆದೇಶ ಹೊರಡಿಸಬೇಕು ಎಂದು ಜಂಬೂ ದೀಪ ಸಿದ್ದರಾಜು, ಸಿವಿ ರಮೇಶ್ ಕುಮಾರ್, ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments